ಕರ್ನಾಟಕದಲ್ಲಿ ಎಲ್ಲೆಡೆ ಹವಾಮಾನ ಏರು ಪೆರು ಆದ ಕಾರಣ ಹಲವೆಡೆ ಮಳೆ ಇದ್ದು ಹಾಗೂ ಹಲವೆಡೆ ಚಳಿ ಇದೆ ಹಾಗೆ ಇನ್ನೂ ಹಲವೆಡೆ ತೀವ್ರ ತಪಮಾನ ಇದ್ದು ಬರ ಉಂಟಾಗಿದೆ ಹೀಗಾಗಿ ರೈತರಿಗೆ ಕರ್ನಾಟಕ ಸರ್ಕಾರದಿಂದ ಬರ ಪರಿಹಾರ ನೀಡಬೇಕೆಂದು ಆಗ್ರಹ ಹಾಗೂ ಹಲವಾರು ಕಡೆಯಿಂದ ಒತ್ತಡ ಹೆರಲಾಯಿತು.
ಕರ್ನಾಟಕ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ಅವರು ಚಳಿಗಾಲದ ಅಧಿವೇಶನ ನಡೆಯುವ ಮುನ್ನ ಬರ ಪರಿಹಾರ ಕಾರ್ಯಕ್ಕೆ ರಾಜ್ಯ ವಿಪತ್ತು ನಿಧಿಯಿಂದ(State Disaster fund ) 324.00 ಕೋಟಿ ರೂಪಾಯಿಯನ್ನು ರಾಜ್ಯ ವಿಪತ್ತು ಪರಿಹಾರ ನಿಧಿ (SDRF)
ಅಡಿಯಲ್ಲಿ ಆದೇಶವನ್ನು ಹೊರಡಿಸಲಾಗಿದೆ ಹಾಗೂ ಪ್ರತಿ ರೈತರಿಗೆ ರೂ. 2000 ವರೆಗೆ ನೆರವು ನೀಡುವುದಾಗಿ ಘೋಷಿಸಿದರು. ವಸ್ತುನಿಷ್ಠ ನಿಯಮಗಳಿಂದ ಮಾರ್ಗದರ್ಶಿಸಲ್ಪಟ್ಟ ಒಂದು ಘಟಕವಾಗಿ ತಾಲೂಕನ್ನು ಬಳಸಿಕೊಂಡು ಬರವನ್ನು ಘೋಷಿಸಿದೆ.
ಕುಡಿಯುವ ನೀರಿನ ಪೂರೈಕೆ, ಸಾಗಣೆ ಮತ್ತು ಮೇವಿನ ಪೂರೈಕೆ ಮತ್ತು ಉದ್ಯೋಗ ಸೃಷ್ಟಿ ಮುಂತಾದ ಪರಿಹಾರಗಳನ್ನು
ಬರ ಪರಿಹಾರ ಪ್ರಯತ್ನಗಳು ಸಾಮಾನ್ಯವಾಗಿ ಪೀಡಿತ ಪ್ರದೇಶಗಳ ಮೇಲೆ ಬರಗಾಲದ ಪರಿಣಾಮಗಳನ್ನು ನಿವಾರಿಸಲು ವಿವಿಧ ಕ್ರಮಗಳನ್ನು ಒಳಗೊಂಡಿರುತ್ತವೆ.
ಇದು ತುರ್ತು ನೀರಿನ ಸರಬರಾಜುಗಳನ್ನು ಒದಗಿಸುವುದು, ಪೀಡಿತ ಜನಸಂಖ್ಯೆಗೆ ಆಹಾರದ ಸಹಾಯವನ್ನು ವಿತರಿಸುವುದು, ನೀರಿನ ಸಂರಕ್ಷಣೆ ಕ್ರಮಗಳನ್ನು ಅನುಷ್ಠಾನಗೊಳಿಸುವುದು, ಸಬ್ಸಿಡಿಗಳು ಅಥವಾ ವಿಮೆಯೊಂದಿಗೆ ರೈತರಿಗೆ ಬೆಂಬಲ ನೀಡುವುದು ಮತ್ತು ಸುಸ್ಥಿರ ನೀರಿನ ನಿರ್ವಹಣೆ ಅಭ್ಯಾಸಗಳನ್ನು ಉತ್ತೇಜಿಸುವುದು.
ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಅಂತರಾಷ್ಟ್ರೀಯ ಏಜೆನ್ಸಿಗಳು ಪರಿಹಾರ ಪ್ರಯತ್ನಗಳನ್ನು ಸಂಘಟಿಸಲು ಮತ್ತು ಬರ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಸಮುದಾಯಗಳಿಗೆ ಸಹಾಯವನ್ನು ಒದಗಿಸಲು ಆಗಾಗ್ಗೆ ಸಹಕರಿಸುತ್ತವೆ.
ಬರ ಪರಿಹಾರ ಹಣವನ್ನು ಪಡೆಯಲು ಅರ್ಹರೆ ಎಂದು ತಿಳಿಯಲು ಈ ಕೆಳಗೆ ಹೇಳಿರುವಂತೆ ಮಾಡಿ
- ಮೊದಲಿಗೆ ವೆಬ್ಸೈಟ್ಅನ್ನು ಭೇಟಿ ನೀಡಿ (ಬರ ಪರಿಹಾರ) ನಂತರ ನೀವು ಕರ್ನಾಟಕ ಸರ್ಕಾರದ ಮುಖಪುಟ ತಲುಪುತ್ತಿರಿ.
- ಇಲ್ಲಿ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಹಾಗೂ ಹೋಬಳಿ ಹಳ್ಳಿಯನ್ನು ಆಯ್ಕೆ ಮಾಡಬೇಕು.
- ನಂತರ ಯಾವ ವರ್ಷದ ಬರ ಪರಿಹಾರದ ಹಣವನ್ನು
- ಪರಿಶೀಲಿಸಬೇಕೆಂದು ಆಯ್ಕೆಮಾಡಿ ನಂತರ ಸೀಸನ್ ಅಲ್ಲಿ ಖಾರೀಫ್ ಆಯ್ಕೆಮಾಡಬೇಕು ಹಾಗೂ calamity ಟೈಪ್ ಅನ್ನು ಆಯ್ಕೆಮಾಡಿ.
- ನಂತರ ಯಾವೆಲ್ಲಾ ರೈತರಿಗೆ ಹಣ ದೊರೆಯಲಿದೆ ಎಂದು ತಿಳಿಯುತ್ತದೆ.
ಕರ್ನಾಟಕ ರಾಜ್ಯ ಸರ್ಕಾರದಿಂದ NDRF ಮಾರ್ಗಸೂಚಿಯಂತೆ ಮೊದಲ ಕಂತಿನ ಹಣವು 90% ರಷ್ಟು ರೈತರಿಗೆ ಜಮೆಯಾಗಿದೆ.
ಈ ಸಂದರ್ಭಗಳಲ್ಲಿ ಬರವು ವ್ಯಾಪಕವಾಗಿ ಹರಡಿದೆ ಮತ್ತು ರಾಜ್ಯದ ನಿಭಾಯಿಸುವ ಸಾಮರ್ಥ್ಯವನ್ನು ಮೀರಿದೆ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (NDRF) ಹಣಕಾಸಿನ ನೆರವು ಕೇಳಿಕೊಂಡು ಭಾರತ ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುತ್ತದೆ.
ಹಣ ಜಮಾ ಆಗಿದೆಯಾ ಎಂದು ಚೆಕ್ ಮಾಡಲು ಹೀಗೆ ಮಾಡಿ
- ಹಣ ಜಮಾ ಅಗಿದನ್ನು check ಮಾಡಲು ಪರಿಹಾರ ಪೇಮೆಂಟ್ ಮೇಲೆ ಕ್ಲಿಕ್ ಮಾಡಿ
- ಆಧಾರ್ ಸಂಖ್ಯೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ calamity ಟೈಪ್ ಅಲ್ಲಿ – drought ಎಂದು ಆಯ್ಕೆ ಮಾಡಿ, ವರ್ಷ 2022-23 ಎಂದು ಆಯ್ಕೆ ಮಾಡ ಬೇಕು.
- ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾವನ್ನು ಭರ್ತಿ ಮಾಡಬೇಕು . ವಿವರಗಳನ್ನು ಪಡೆಯಲು /fetch details ಎಂಬ ಆಯ್ಕೆ ಕ್ಲಿಕ್ ಮಾಡಿದರೆ ಬರ ಪರಿಹಾರದ ಸ್ಟೇಟಸ್ ದೊರೆಯುತ್ತದೆ.
ರೈತರ ಫೋನಗೆ ಪರಿಹಾರ ಹಣ ಜಮೆ ಆದ ಸಂದೇಶ ಬಂದರೂ ಕೂಡ ಹಣ ಜಮೆ ಆಗದಿರಲು ಕೃಷಿ ಇಲಾಖೆ ಹಲವಾರು ಕಾರಣಗಳನ್ನು ನೀಡಿದೆ.
ಕಾರಣಗಳು ಕೆಳಗಿನಂತಿವೆ
1. ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಲಿಂಕ್ (NPCI mapping) ಆಗದಿರುವುದು.
2. ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯು ಸ್ಥಗಿತವಾದ ಕಾರಣ.
3. ರೈತರ fruits ID ಅಲ್ಲಿ ಜಮೀನಿನ ಸರ್ವೇ ನಂಬರ್ ಇರದೇ ಇರುವ ಕಾರಣ.
4. FID ತಾತ್ರಂಶದಲ್ಲಿ ಇರುವ ಹೆಸರು ಹಾಗೂ ಆಧಾರ್ ಕಾರ್ಡ್ ಅಲ್ಲಿ ಇರುವ ಹೆಸರು ಹೊಂದಿಕೆ ಆಗದಿರುವ ಕಾರಣ.
5. ರೈತರ ಜಮೀನಿನ ಸರ್ವೇ ನಂಬರ ಅಲ್ಲಿ FID ರಚನೆ ಆಗದಿರುವುದು.
ಈ ಕಾರಣಗಳಿಂದ ಕೆಲವು ರೈತರಿಗೆ ಬೆಳೆ ಹಾನಿ ಅಥವಾ ಬರ ಪರಿಹಾರದ ಹಣ ಜಮೆ ಆಗಿರುವುದಿಲ್ಲ ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡು ರೈತರು ಹಣವನ್ನು ಪಡೆಯಬಹುದಾಗಿದೆ.
ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳವ ವಿಧಾನ
ಇಲ್ಲಿಯವರೆಗೆ ಮೊದಲ ಕಂತಿನ ಹಣವನ್ನು ಪಡೆಯದೇ ಇರುವ ರೈತರು ತಮ್ಮ ತಾಲೂಕಿನ ಕೃಷಿ ಅಥವಾ ಕಂದಾಯ ಇಲಾಖೆಯ ಕಚೇರಿಯನ್ನು ಭೇಟಿ ನೀಡಿಬೆಳೆ ನಷ್ಟದ ಮೊದಲ ಕಂತಿನ ಹಣ ಪಡೆದವರ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿದುಕೊಂಡು
ನಿಮ್ಮ ಹೆಸರು ಇದ್ದಲ್ಲಿ ಅದನ್ನು ಹೇಗೆ ಸರಿ ಪಡಿಸಿಕೊಳ್ಳಬೇಕು ಎಂದು ಕೇಳಿ ತಿಳಿದುಕೊಂಡು ನಿಮ್ಮ ಬರ ಪರಿಹಾರದ ಹಣವನ್ನು ಪಡೆಯಬಹುದು.
RTC ಆಧಾರ್ ಲಿಂಕ್: ಆಧಾರ್ ಜೊತೆ ಪಹಣಿ ಲಿಂಕ್ ಮಾಡುವುದು ಹೇಗೆ?
ಕರ್ನಾಟಕ ಸರ್ಕಾರವು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒದಗಿಸಲು “ಶಾಶ್ವತ ಪರಿಹಾರ” ವಾಗಿ ಎಲ್ಲಾ ಆರ್‌ಟಿಸಿಗಳನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಹೆಚ್ಚಿನ ಸಂಖ್ಯೆಯ ಹಕ್ಕುಗಳು, ಗೇಣಿದಾರರು ಮತ್ತು ಬೆಳೆಗಳ (RTC) ದಾಖಲೆಗಳು ಇನ್ನೂ ಸತ್ತ ರೈತರ ಹೆಸರಲ್ಲಿ ಇವೆ.
ಅರ್ಹ ರೈತರಿಗೆ RTC ಯೊಂದಿಗೆ ಆಧಾರ್ ಕಾರ್ಡ್‌ಗಳನ್ನು ಸೀಡಿಂಗ್ ಮಾಡುವುದರಿಂದ ಭೂ-ಸಂಬಂಧಿತ ವಂಚನೆಗಳನ್ನು ನಿಲ್ಲುತ್ತವೆ ಮತ್ತು ಮಾಲೀಕತ್ವಕ್ಕೆ ಬಂದಾಗ ಖಚಿತತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.
ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಎಲ್ಲಾ ಆರ್‌ಟಿಸಿಗಳನ್ನು ಆಧಾರ್‌ನೊಂದಿಗೆ ಜೋಡಿಸಲು ಮತ್ತು ಆಧಾರ್ ದೃಢೀಕರಣವನ್ನು ಬಳಸಲು ನಾವು ಯೋಚಿಸುತ್ತಿದ್ದೇವೆ ಎಂದು ಗೌಡರು ವಿಧಾನಸಭೆಯಲ್ಲಿ ತಿಳಿಸಿದರು.
ಪಹಣಿ ಎಂದೂ ಕರೆಯಲ್ಪಡುವ ಆರ್ ಟಿ ಸಿ ಯು ಮಾಲೀಕರ ವಿವರಗಳು, ವಿಸ್ತೀರ್ಣ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಒತ್ತುವರಿ, ಬೆಳೆದ ಬೆಳೆಗಳು ಮತ್ತು ಮುಂತಾದ ಮಾಹಿತಿಯನ್ನು ಒಳಗೊಂಡಿದೆ.
ಜಮೀನು ಹಂಚಿಕೆ ಮಾಡುವಾಗ ಕುಟುಂಬದಲ್ಲಿ ಇರುವ ವಿವಾದಗಳು ಸೇರಿದಂತೆ ವಿವಿಧ ಕಾರಣಗಳಿಂದ ಅವರ ಮಕ್ಕಳು ತಮ್ಮ ಹೆಸರಿಗೆ ಭೂ ದಾಖಲೆಗಳನ್ನು ಬದಲಾಯಿಸಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪ್ರಾಯೋಗಿಕವಾಗಿ 19 ಲಕ್ಷ ರೈತರ ಬಿತ್ತನೆ ಸಂದರ್ಭದಲ್ಲಿ ಮೃತ ರೈತರ ಹೆಸರಿನಲ್ಲಿ ಆರು ಲಕ್ಷ RTC ಗಳು ಇರುವುದು ಪತ್ತೆಯಾಗಿದೆ.
ಭೂಮಾಲೀಕರು ಅಥವಾ ರೈತರ ಮನೆಗಳಿಗೆ ಅಥವಾ ಗ್ರಾಮ ಲೆಕ್ಕಾಧಿಕಾರಿ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಎಲ್ಲಾ RTC ಗಳನ್ನು ಆಧಾರ್ ಕಾರ್ಡ್ ಗಳೊಂದಿಗೆ ಲಿಂಕ್ ಮಾಡುವಲ್ಲಿ ಇಲಾಖೆ ಅಧಿಕಾರಿಗಳು ತೊಡಗಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
“ನನ್ನ ಭೂಮಿ, ನನ್ನ ಗುರುತು” (My land, my identity ) ಅಡಿಯಲ್ಲಿ, ಕಂದಾಯ ಇಲಾಖೆಯು RTC ಯೊಂದಿಗೆ ಆಧಾರ್ ಕಾರ್ಡ್ ಅನ್ನು ಸೀಡಿಂಗ್ ಮಾಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳು ಆಧಾರ್-ಲಿಂಕ್ ಮಾಡಿದ RTC ಗಳ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
ಮೃತ ರೈತರು ಅಥವಾ ಕುಟುಂಬಗಳ ಮಕ್ಕಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಭೂ ದಾಖಲೆಗಳನ್ನು ಅವರ ಹೆಸರಿಗೆ ಬದಲಾಯಿಸಲು ಇಲಾಖೆಯು ‘Kandaya Adalat’ ಅನ್ನು ಪ್ರಾರಂಭಿಸುತ್ತದೆ.
ದಾಖಲೆಯಲ್ಲಿ, ರಾಜ್ಯದಲ್ಲಿ 1.87 ಕೋಟಿ ಆರ್ ಟಿ ಸಿ ಗಳಿದ್ದು, ಬಹು ಹೆಸರುಗಳ ಆರ್ ಟಿ ಸಿಗಳು 3.86 ಕೋಟಿ ಎಂದು ದಾಖಲಾಗಿವೆ .
ಆಧಾರ್ ಕಾರ್ಡ್ ಅನ್ನು ಪಹಣಿಗೆ ಮೊಬೈಲ್ ಅಲ್ಲಿ ಜೋಡಣೆ ಮಾಡುವುದು ಹೇಗೆ?
ರೈತರು ಅಥವಾ ಭೂಮಿಯ ಮಾಲೀಕರು ಕಂದಾಯ ಇಲಾಖೆಯ bhoomi ವೆಬ್ಸೈಟ್ ಅಲ್ಲಿ ಈ ಕೆಳಗೆ ವಿವರಿಸಿದಂತೆ ನಿಮ್ಮ ಆರ್ ಟಿ ಸಿ ಗೆ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡಬಹುದು ಆಗಿದೆ.
1. ಮೊದಲನೇಯದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು RTC aadhar
ಲಿಂಕ್ ನಿಮ್ಮನ್ನು ಅಧಿಕೃತ ಭೂಮಿ ವೆಬ್ಸೈಟ್ ಗೆ ಕರೆದೊಯ್ಯುತ್ತದೆ.
ಇಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಕೆಳಗೆ ನೀಡಿರುವಂತೆ ಕ್ಯಾಪ್ಚರ್ವನ್ನು ಹಾಕಬೇಕು ನಂತರ ‘send otp’ ಮೇಲೆ ಕ್ಲಿಕ್ ಮಾಡಬೇಕು.
2. ಈಗ ನಿಮ್ಮ ಮೊಬೈಲಿಗೆ ಬಂದ ಆರು ಅಂಗೆಯ ಒಟಿಪಿಯನ್ನು ಹಾಕಿ ನಂತರ ‘login’ ಬಟನ್ ಮೇಲೆ ಕ್ಲಿಕ್ ಮಾಡಬೇಕು.
3. ನಂತರ ಜಮೀನಿನ ಮಾಲೀಕರ ಆಧಾರ್ ಸಂಖ್ಯೆ ಹಾಗೂ ಆಧಾರ್ ನಲ್ಲಿ ಇರುವಂತೆ ಹೆಸರನ್ನು ಅಲ್ಲಿ ಹಾಕಿ ‘verify’ ಬಟನ್ ಮೇಲೆ ಕ್ಲಿಕ್ ಮಾಡಬೇಕು.
4. ಈಗ ನಿಮ್ಮ ಆಧಾರನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಅಥವಾ (aadhar verified successfully) ಎಂದು ತೋರಿಸುತ್ತದೆ ಆಗ ok ಎಂದು ಕ್ಲಿಕ್ ಮಾಡಬೇಕು.
5. ಈ ಮೇಲೆ ಸೂಚಿಸಿದ ಎಲ್ಲಾ ವಿಧಾನಗಳು ಮುಗಿದ ನಂತರ ಅಲ್ಲೇ ಕಾಣುವ “ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ” ಈ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ಮತ್ತೆ ಜಮೀನಿನ ಮಾಲೀಕರ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿ ‘generate otp’ ಬಟನ್ ಮೇಲೆ ಕ್ಲಿಕ್ ಮಾಡಿ
ಈಗ ಮೇಲೆ ನಮೂದಿಸಿದ ಆಧಾರ್ ಸಂಖ್ಯೆಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಆರು ಅಂಕಿಯ ಒಟಿಪಿ ಬಂದಿರುತ್ತದೆ ಇದನ್ನು ‘enter otp’ ಅಲ್ಲಿ ನಮೂದಿಸಿ ‘submit’ ಬಟನ್ ಮೇಲೆ ಕ್ಲಿಕ್ ಮಾಡಬೇಕು.
6. ಈ ಪೇಜ್ ನ ಎಡಬದಿಯಲ್ಲಿರುವ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಂತರ ಸಿಗುವ ನಿಮ್ಮ ಸರ್ವೇ ನಂಬರ್1 ಟಿಕ್ ಮಾಡಿಕೊಂಡು ಅದರ ಬದಿಯಲ್ಲಿ ಕಾಣುವ ‘Link’ ಬಟನ್ ಮೇಲೆ ಕ್ಲಿಕ್ ಮಾಡಬೇಕು.
7. ಈಗ ನಿಮ್ಮ ಮೊಬೈಲ್ ಗೆ ಮತ್ತೆ ಆರು ಅಂಕಿಯ otp ಬರುತ್ತದೆ ಇದನ್ನು ಹಾಕಿ ‘verify otp’ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ‘ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ?’/’Do you want to link your aadhar with the RTC?’ ಎಂದು ಕೇಳುತ್ತದೆ ಆಗ ನೀವು yes / ಹೌದು ಎಂದು ಕ್ಲಿಕ್ ಮಾಡಿದರೆ ‘ನಿಮ್ಮ ಆರ್ ಟಿ ಸಿ ಅನ್ನು ಆಧಾರ್ ನೋಂದಿಗೆ ಲಿಂಕ್ ಮಾಡಲಾಗಿದೆ’ / ‘your RTC is linked with the aadhar’ ಎಂದು ತಿಳಿಸುತ್ತದೆ.
ಇದೇ ರೀತಿ ಒಂದೊಂದು ಸರ್ವೆ ನಂಬರ್ ಅನ್ನು ಸೆಲೆಕ್ಟ್ ಮಾಡಿಕೊಂಡು ಓಟಿಪಿ ಪಡೆದು ಆಧಾರ್ ಕಾರ್ಡ್ ಅನ್ನು ಎಲ್ಲಾ ಸರ್ವೆ ನಂಬರ್ ಗಳಿಗೆ ಲಿಂಕ್ ಮಾಡಬಹುದು.
RTC ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಹೇಗೆ ಚೆಕ್ ಮಾಡುವುದು.
RTC ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಹೇಗೆ ಎಂದರೆ ಈ ಮೇಲೆ ತಿಳಿಸಿರುವಂತೆ ಎಲ್ಲ ವಿಧಾನಗಳನ್ನು ಅನುಸರಿಸಿ ಕೊನೆಯಲ್ಲಿ link ಬಟನ್ ಮೇಲೆ ಕ್ಲಿಕ್ ಮಾಡಿ ಓಟಿಪಿ ಪಡೆದು
ನಂತರ verify ಮೇಲೆ ಕ್ಲಿಕ್ ಮಾಡಿದಾಗ ಈ ಸರ್ವೇ ನಂಬರ್ ಈಗಾಗಲೇ ಲಿಂಕ್ ಆಗಿದೆ ಅಥವಾ ‘this survey number already linked’ ಎನ್ನುವ ಸಂದೇಶ ತೋರಿಸಿದರೆ ನಿಮ್ಮ ಆರ್ ಟಿ ಸಿ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಬಹುದು
ಅಥವಾ ಹೀಗೆ ತೋರಿಸದಿದ್ದಲ್ಲಿ ನೀವು ಇನ್ನುಳಿದ ವಿಧಾನಗಳನ್ನು ಮತ್ತೆ ಕಂಪ್ಲೀಟ್ ಮಾಡಬೇಕು.
ಹಸಿರು ಮನೆ ಕೃಷಿಯ ಅಧಿಕ ಲಾಭಗಳು ಹಾಗೂ ಅದಕ್ಕೆ ಸಿಗುವ subsidy ಗಳ ಬಗ್ಗೆ ತಿಳಿಯಿರಿ.https://samruddhakrushi.com/index.php/2024/03/27/52/